ಜೈವಿಕ ಇಂಧನ ಸುರಕ್ಷಿತ ನೈಸರ್ಗಿಕ ಇಂಧನ, ದೇಶದ ಪರಿಸರಕ್ಕ, ಇಂಧನ ಸುರಕ್ಷತೆಗೆ ಮತ್ತು ಆರ್ಥಿಕತೆಗೆ ನವಚೇತನ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸ್ಥಾಪನೆ ಕರ್ನಾಟಕ ರಾಜ್ಯ ಸರ್ಕಾರದ ಅತ್ಯಂತ ಹೆಮ್ಮೆಯ ಮತ್ತು ಇಡೀ ರಾಷ್ಟ್ರದ ಗಮನ ಸೆಳೆಯುವ ಸಾಧನೆಯಾಗಿದೆ. ಕಚ್ಚಾತೈಲದ ಆಮದು ಮತ್ತು ಬಳಕೆಯಿಂದ, ರಾಷ್ಟ್ರದ ಪರಿಸರದ ಮತ್ತು ಆರ್ಥಿಕತೆ ಮೇಲಾಗುತ್ತಿರುವ ತೀವ್ರತರ ವ್ಯತಿರಿಕ್ತ ಪರಿಣಾಮಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಹಲವಾರು ಪರಿಸರ ಪ್ರೇಮಿಗಳ, ತಜ್ಞರ, ಸಾರ್ವಜನಿಕರ ಆಶಯ-ಹಂಬಲ ಮತ್ತು ಬಹುದಿನಗಳ ಒತ್ತಾಯ, ಪ್ರಯತ್ನಗಳ ಫಲವಾಗಿ ಕರ್ನಾಟಕ ರಾಜ್ಯ ಸರ್ಕಾರ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿರುವುದು ಅತ್ಯಂತ ಸೂಕ್ತ ಮತ್ತು ಸಮಯೋಚಿತ ವ್ಯವಸ್ಥೆಯಾಗಿದೆ. ಹೊಸ-ಹೊಸ ಜೈವಿಕ ಇಂಧನಗಳ ಅಭಿವೃದ್ಧಿ ಮತ್ತು ಹೆಚ್ಚು-ಹೆಚ್ಚು ಜೈವಿಕ ಇಂಧನ ಉತ್ಪಾದಿಸುವ, ನಿಗದಿತ ಗುರಿ ಸಾಧಿಸುವ ಹಲವಾರು ಕಾರ್ಯಕ್ರಮಗಳನ್ನು ರಚನಾತ್ಮಕವಾಗಿ, ಸಮಗ್ರ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾದ ನೀತಿ-ನಿಯಮಗಳನ್ನು ರಚಿಸಿ, ಅನುಸರಿಸಿ, ಅನುಷ್ಟಾನಗೊಳಿಸುವ ಜವಬ್ದಾರಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯದ್ದಾಗಿದೆ, ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ದೇಶದ ಇಲ್ಲಾ ರಾಜ್ಯಗಳಿಗಿಂತ ಜೈವಿಕ ಇಂಧನಗಳ ಅಭಿವೃದ್ಧಿಯಲ್ಲಿ ಮಹತ್ತರ ಹೆಜ್ಜೆಯನ್ನಿಟ್ಟಿದೆ ಮತ್ತು ಜೈವಿಕ ಇಂಧನ ಉತ್ಪಾದನೆಯ ಹಾದಿಯಲ್ಲಿ ಒಂದು ಮಾದರಿ ರಾಜ್ಯವಾಗಿದೆ. |
ಕನ್ನಡನಾಡಿನ ಜೈವಿಕ ಇಂಧನ ಕೃಷಿಕರಿಗೆ, ಕನ್ನಡ ಓದುಗರಿಗೆ, ಮತ್ತು ಎಲ್ಲರಿಗೆ ಜೈವಿಕ ಇಂಧನ ಮಂಡಳಿ ಅನುಷ್ಟಾ ನಗೊಳಿಸುತ್ತಿರುವ ಮತ್ತು ಯೋಜಿಸುತ್ತಿರುವ ವಿವಿಧ ಜೈವಿಕ ಇಂಧನ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ಸವಿವರ ಮಾಹಿತಿಯನ್ನು ಕನ್ನಡದಲ್ಲಿ ಅತ್ಯಂತ ಶೀಘ್ರವಾಗಿ ಒದಗಿಸುವ ಉದ್ದೇಶದಿಂದ ಈ ಕನ್ನಡ ಆವೃತ್ತಿಯಲ್ಲಿ ಜೈವಿಕ ಇಂಧನ ಕುರಿತ ಮಾಹಿತಿಯನ್ನು ಅಂತರ್ಜಾಲದ ಮೂಲಕ ನಮ್ಮ ಅಧಿಕೃತ ವೆಬ್ಸೈಟ್‌ನಲ್ಲಿ ಸಾರ್ವಜನಿಕರಿಗೆ ಒದಗಿಸಲು ಹರ್ಷಿಸುತ್ತೇವೆ. ಇಲ್ಲಿ ಒದಗಿಸಿರುವ ಮಾಹಿತಿಗಳೆಲ್ಲವು ಜೈವಿಕ ಇಂಧನ ಅಭಿವೃದ್ಧಿಯ ಕಾರ್ಯಗಳೆಲ್ಲವನ್ನು ಉತ್ತೇಜಿಸುವ, ತಿಳುವಳಿಕೆ ನೀಡುವ ಮತ್ತು ಮೂಲ ಯೋಜನೆಗಳಿಗೆ ಎಲ್ಲ ಸಾರ್ವಜನಿಕರ ಸಂಘ-ಸಂಸ್ಥೆಗಳಿಂದ ಮಾರ್ಗದರ್ಶನ ಮತ್ತು ಸಹಕಾರ ಪಡೆಯುವ ಉದ್ದೇಶಗಳನ್ನು ಮಾತ್ರ ಹೊಂದಿದೆ. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅಧಿಕೃತ ಮತ್ತು ಹೆಚ್ಚಿನ ಮಾಹಿತಿಗಾಗಿ ಮಂಡಳಿಯನ್ನು ಸಂಪರ್ಕಿಸಬಹುದಾಗಿದೆ. |